27 Jan 2026

Inaugration of Department of Dravyaguna, Department of Rasashatra and Department of Roganidana and New Library 

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ನವೀಕರಿಸಿದ ಕೇಂದ್ರ ಗ್ರಂಥಾಲಯ ಮತ್ತು ಮೂರು ವಿಭಾಗಗಳ ಉದ್ಘಾಟನಾ ಸಮಾರಂಭವು ಎಸ್.ಡಿ.ಎಮ್. ಎಜ್ಯುಕೇಶನಲ್ ಸೊಸೈಟಿಯ ಅಧ್ಯಕ್ಷರಾದ ಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ದಿನಾಂಕ ೨೩-೦೧-೨೦೨೬ ರಂದು ನೆರವೇರಿಸಲಾಯಿತು. ಕೇಂದ್ರ ಗ್ರಂಥಾಲಯ ಮತ್ತು ರೋಗನಿದಾನ ಮತ್ತು ವಿಕೃತಿ ವಿಜ್ಞಾನ ವಿಭಾಗವನ್ನು ಎಸ್.ಡಿ.ಎಮ್. ಎಜ್ಯುಕೇಶನಲ್ ಸೊಸೈಟಿಯ ಅಧ್ಯಕ್ಷರಾದ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಉದ್ಘಾಟಿಸಿದರು. ರಸಶಾಸ್ತç ಹಾಗೂ ಬೈಷಜ್ಯ ಕಲ್ಪನ ವಿಭಾಗವನ್ನು ಎಸ್.ಡಿ.ಎಮ್. ಎಜ್ಯುಕೇಶನಲ್ ಸೊಸಾÊಟಿಯ ಉಪಾಧ್ಯಕ್ಷರಾದ ಶ್ರೀ ಡಿ. ಸುರೇಂದ್ರ ಕುಮಾರ್ ಮತ್ತು ಧಾರವಾಡ ಎಸ್.ಡಿ.ಎಮ್. ವಿಶ್ವವಿದ್ಯಾಲಯದ ಉಪಕುಲಪತಿಯವರಾದ ಡಾ. ನಿರಂಜನ್ ಕುಮಾರ್‌ರವರು ಹಾಗೂ ದ್ರವ್ಯಗುಣ ವಿಭಾಗವನ್ನು ಎಸ್.ಡಿ.ಎಮ್. ಎಜ್ಯುಕೇಶನಲ್ ಸೊಸಾÊಟಿಯ ಉಪಾಧ್ಯಕ್ಷರಾದ ಶ್ರೀ ಡಿ. ಸುರೇಂದ್ರ ಕುಮಾರ್‌ರವರು ಉದ್ಘಾಟಿಸಿದರು. ನವಿಕೃತ ವಿಭಾಗವು ಆಧುನಿಕ ಪ್ರಯೋಗಾಲಯ, ವಿಕೃತಿ ವಿಜ್ಞಾನ ಸಂಗ್ರಹಾಲಯ, ಔಷಧ ದ್ರವ್ಯ ಸಂಗ್ರಹಣೆ ಮತ್ತು ಸಂಸ್ಕರಣಾ ಘಟಕ, ಔಷಧ ಉಪಯೋಗಿ ಸಸ್ಯಗಳ ಸಂಗ್ರಹ ಹೊಂದಿದೆ. ಎಸ್.ಡಿ.ಎಮ್. ಎಜ್ಯುಕೇಶನಲ್ ಸೊಸೈಟಿಯ ನಿರ್ದೇಶಕರಾದ ಶ್ರೀ ಡಿ. ಶ್ರೇಯಸ್ ಕುಮಾರ್, ಎಸ್.ಡಿ.ಎಮ್. ಎಜ್ಯುಕೇಶನಲ್ ಸೊಸೈಟಿಯ ನಿರ್ದೇಶಕರು (ಹಣಕಾಸು) ಶ್ರೀ ನಿಶ್ಚಲ್ ಕುಮಾರ್ ಡಿ., ಎಸ್.ಡಿ.ಎಮ್. ಎಜ್ಯುಕೇಶನಲ್ ಸೊಸೈಟಿಯ ಕಾರ್ಯದರ್ಶಿಯವರಾದ ಡಾ. ಸತೀಶ್ಚಂದ್ರ ಎಸ್., ಎಸ್.ಡಿ.ಎಮ್. ಎಜ್ಯುಕೇಶನಲ್ ಸೊಸೈಟಿಯ ಐಟಿ ಮತ್ತು ಹಾಸ್ಟೆಲ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಪೂರನ್ ವರ್ಮ, ಎಸ್.ಡಿ.ಎಮ್. ಆಯುರ್ವೇದ ಸಂಸ್ಥೆಗಳ ನಿರ್ದೇಶಕರಾದ ಡಾ. ಪ್ರಸನ್ನ ನರಸಿಂಹ ರಾವ್, ಪ್ರಾಂಶುಪಾಲರಾದ ಡಾ. ಮಮತಾ ಕೆ.ವಿ., ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ನಾಗಾರಾಜ್ ಎಸ್.ರವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಧಾರವಾಡ ಎಸ್.ಡಿ.ಎಮ್. ವಿಶ್ವವಿದ್ಯಾಲಯ ಹಾಗೂ ವಿವಿದ ಎಸ್.ಡಿ.ಎಮ್. ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.