13 Aug 2025
ಮದ್ಯವರ್ಜನ ಸಲಹಾ ಸಮಾಲೋಚನ
ABOUT EVENT
ಕುತ್ಪಾಡಿಯ ಎಸ್.ಡಿ.ಎಂ. ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಮನೋವಿಜ್ಞಾನ ಹಾಗೂ ಮಾನಸರೋಗ ಸ್ನಾತಕೋತ್ತರ ವಿಭಾಗವು ಅನಾನಿಮಸ್ ಅಲ್ಕೋಹಾಲಿಕ್ಸ್ ಸಂಸ್ಥೆಯ ಸಹಯೋಗದೊಂದಿಗೆ ದಿನಾಂಕ 13/08/2025, ಬುಧವಾರದಂದು ಮಧ್ಯಾಹ್ನ 3 ಗಂಟೆಯಿಂದ 5 ಗಂಟೆಯವರೆಗೆ ಮದ್ಯವರ್ಜನ ಸಲಹಾ ಸಮಾಲೋಚನ ಕಾರ್ಯಕ್ರಮವನ್ನು ಆಸ್ಪತ್ರೆಯಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ತಮ್ಮ ಅನುಭವ, ಧನಾತ್ಮಕ ಚಿಂತನೆ ಹಾಗೂ ಮನೋಸ್ಥೈರ್ಯವನ್ನು ಪರಸ್ಪರ ಹಂಚಿಕೊಂಡು ಮದ್ಯದ ಅಮಲುತನದ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗುತ್ತದೆ.
ಮದ್ಯ ಅಥವಾ ಇತರ ಅಮಲು ಪದಾರ್ಥದ ದುರಭ್ಯಾಸ ಇರುವವರು ಹಾಗೂ ಅವರ ಮನೆಯವರು ಈ ಉಚಿತ ಸಮಾಲೋಚನೆಯಲ್ಲಿ ಭಾಗಿಯಾಗಿ ಸದುಪಯೋಗವನ್ನು ಪಡೆಯಬೇಕೆಂದು ವಿಭಾಗದ ಪ್ರಕಟಣೆ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ – 8867752511, 8660202542