22 Nov 2025
ಶ್ರೀ ಧನ್ವಂತರಿ ಜಯಂತಿಯ ವಿಜೃಂಭಣೆಯ ಆಚರಣೆ
ಮಹಾವಿಷ್ಣುವಿನ ಅವತಾರ ಎಂದು ಗುರುತಿಸಲ್ಪಟ್ಟು ವೈದ್ಯವಿದ್ಯೆಗೆ ಅಧಿದೇವತೆಯಾದ ಶ್ರೀ ಧನ್ವಂತರಿ ದೇವರ ಜಯಂತಿಯನ್ನು ಶ್ರೀ ಧರ್ಮಸ್ಥಳ ಮ೦ಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಕುತ್ಪಾಡಿ, ಉಡುಪಿಯಲ್ಲಿ ವಿಶಿಷ್ಟವಾಗಿ ನವಂಬರ್ ೧೭, ಕಾರ್ತಿಕ ಕೃಷ್ಣ ತ್ರಯೋದಶಿಯಂದು ಪ್ರಾಂಶುಪಾಲರಾದ ಡಾ. ಮಮತಾ ಕೆ.ವಿಯವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು. ವಿದ್ವಾನ್ ಪುರೋಹಿತ ಬಾಲಕೃಷ್ಣ ಭಟ್ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದರು. ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಭಜನಾ ಸಂಕೀರ್ತನೆಯಿAದ ಶ್ರೀ ಧನ್ವಂತರಿಯನ್ನು ಕ್ರೃಪಾಕಟಾಕ್ಷಕ್ಕಾಗಿ ಬೇಡಿದರು. ವಿದ್ವಾನ್ ಪುರೋಹಿತ ಬಾಲಕೃಷ್ಣ ಭಟ್ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದರು.
ಸ್ನಾತಕ ವಿದ್ಯಾರ್ಥಿ ಸಹಾಯಕ ಕ್ಷೇಮಪಾಲನಾಧಿಕಾರಿ ಡಾ. ಪೃಥ್ವಿರಾಜ್ ಪುರಾಣಿಕ್ ಹಾಗೂ ಸ್ನಾತಕೋತ್ತರ ವಿಭಾಗದ ಡೀನ್ ಡಾ. ಶ್ರೀಕಾಂತ್ ಪಿ., ಪ್ರಾಧ್ಯಾಪಕರಾದ ಡಾ. ವೀರಕುಮಾರ್ ಕೆ., ಡಾ. ವಿಜಯ್ ಬಿ. ನೆಗಳೂರ್ ಹಾಗೂ ಸಂಸ್ಥೆಯ ಇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
