03 Oct 2025

೧೦ನೇ ರಾಷ್ಟೀಯ ಆಯುರ್ವೇದ ದಿನಾಚರಣೆ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಉಡುಪಿಯಲ್ಲಿ ದಿನಾಂಕ ೨೩-೦೯-೨೦೨೫ ರಂದು ೧೦ ನೇ ರಾಷ್ಟಿçÃಯ ಆಯುರ್ವೇದ ದಿನಾಚರಣೆಯನ್ನು ಆಚರಿಸಲಾಯಿತು. ಇದರಲ್ಲಿ ಮುಖ್ಯ ಅತಿಥಿಯಾಗಿ ರಾಷ್ಟಿçÃಯ ಆಯುರ್ವೇದ ವಿದ್ಯಾಪೀಠದ ಗುರುಗಳು ಹಾಗೂ ಧನ್ವಂತರಿ ಆಯುರ್ವೇದ ಆಸ್ಪತ್ರೆಯ ವೈದ್ಯರಾದ ಡಾ. ಎ. ರಾಘವೇಂದ್ರ ಆಚಾರ್ಯರವರು ಭಾಗವಹಿಸಿ ಆಯುರ್ವೇದದಿಂದ ರೋಗಿಗಳನ್ನು ಗುಣಪಡಿಸಿದ ಚಿಕಿತ್ಸಾ ಅನುಭವವನ್ನು ಹಂಚಿಕೊAಡರು. ಗೌರವ ಅತಿಥಿಗಳಾಗಿ ಭಾಗವಹಿಸಿದ ರೋಟೇರಿಯನ್ ಪಿ.ಎಚ್.ಎಫ್, ಪಿ.ಡಿ.ಜಿ. ದೇವಾನಂದ ಅವರು ಸಮಾಜ ಸೇವೆಯಲ್ಲಿ ಆಯುರ್ವೇದ ವೈದ್ಯರು ಸಮರ್ಪಣಾ ಭಾವದಿಂದ ಸಮಾಜಕ್ಕೆ ಸೇವೆ ಸಲ್ಲಿಸಬೇಕೆಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಉಪಪ್ರಾಂಶುಪಾಲರಾದ ಡಾ. ನಿರಂಜನ್ ರಾವ್‌ರವರು ಇಂದಿನ ಆಧುನಿಕ ಯುಗದಲ್ಲಿ ಆಯುರ್ವೇದದ ಅಗತ್ಯತೆಯನ್ನು ತಿಳಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಮಮತಾ ಕೆ.ವಿ. ಹಾಗೂ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ನಾಗರಾಜ್ ಎಸ್.ರವರ ಮಾರ್ಗದರ್ಶನದಂತೆ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಉಪ ವೈದ್ಯಕೀಯ ಅಧೀಕ್ಷಕರಾದ ಡಾ. ದೀಪಕ್ ಎಸ್.ಎಮ್., ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ನಿಶಾಂತ್ ಪೈ, ಸ್ನಾತಕೋತ್ತರ ವಿಭಾಗದ ಡೀನ್ ಡಾ. ಶ್ರೀಕಾಂತ್ ಪಿ., ಸ್ನಾತಕ ವಿಭಾಗದ ಡೀನ್ ಡಾ. ಪ್ರಥ್ರಿರಾಜ್ ಪುರಾಣಿಕ್‌ರವರು ಉಪಸ್ಥಿತರಿದ್ದರು.

ರಾಷ್ಟಿçÃಯ ಆಯುರ್ವೇದ ದಿನಾಚರಣೆಯ ಪ್ರಯುಕ್ತ ನಡೆದ ಹಲವಾರು ಕಾರ್ಯಕ್ರಮಗಳ ವರದಿಯನ್ನು ಆಸ್ಪತ್ರೆಯ ವೈದ್ಯರಾದ ಡಾ. ಸುಷ್ಮಾ ಶೆಣೈಯವರು ವಾಚಿಸಿದರು. ಸಹಾಯಕ ಪ್ರಾಧ್ಯಾಪಕರಾದ ಡಾ. ಶ್ರೀನಿಧಿ ಧನ್ಯರವರು ‘ಯೋಗಸುಧಾ’ -ಕ್ಲಿನಿಕಲ್ ಯೋಗ ಸರ್ಟಿಫಿಕೇಟ್ ಕೋರ್ಸ್ನ ಪ್ರಮಾಣ ಪತ್ರ ಪಡೆಯಲು ಕಿರುವೈದ್ಯರನ್ನು ವೇದಿಕೆಗೆ ಆಹ್ವಾನಿಸಿದರು. ಸಹಾಯಕ ಪ್ರಾಧ್ಯಾಪಕರಾದ ಡಾ. ಸೌಮ್ಯ ಭಟ್‌ರವರು ರಾಷ್ಟಿçÃಯ ಆಯುರ್ವೇದ ದಿನಾಚರಣೆಯ ಪ್ರಯುಕ್ತ ನಡೆಸಿದ ವಿವಿಧ ಸ್ಪರ್ಧೆಗಳ ವಿಜೇತರನ್ನು ಬಹುಮಾನವನ್ನು ಪಡೆಯಲು ವೇದಿಕೆಗೆ ಆಹ್ವಾನಿಸಿದರು. ಸಹಾಯಕ ಪ್ರಾಧ್ಯಾಪಕರಾದ ಡಾ. ಸರಿತಾ ಟಿ.ಯವರು ಆಯುರ್ವೇದ ದಿನದ ಪ್ರತಿಜ್ಞಾ ವಿಧಿ ಬೋಧಿಸಿದರು. ಸಹಪ್ರಾಧ್ಯಾಪಕರಾದ ಡಾ. ರಾಕೇಶ್ ಆರ್. ರವರು ಸ್ವಾಗತಿಸಿ, ಆಂತರಿಕ ಆಡಳಿತ ಸಮಿತಿಯ ಮುಖ್ಯಸ್ಥರಾದ ಡಾ. ವಿಜಯ್ ನೆಗಳೂರ್‌ರವರು ವಂದಿಸಿದರು. ಶ್ರೀಮತಿ ಸುಚಿತ್ರಾ ಎನ್. ಪ್ರಭು ರವರು ಕಾರ್ಯಕ್ರಮವನ್ನು ನಿರೂಪಿಸಿದರು. ರಾಷ್ಟçಗೀತೆ ಹಾಡುವ ಮೂಲಕ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.